Sri Shrinivasa Kapadu
Hemanth
ಪೂರ್ವ ಜನ್ಮದಲಿ ನಾ ಮಾಡಿದ ಪಾಪದಿಂ ದುರ್ವಿಯೊಳು ಜನಿಸಿದೆನು ಕೃಷ್ಣ ಪೂರ್ವ ಜನ್ಮದಲಿ ನಾ ಮಾಡಿದ ಪಾಪದಿಂ ದುರ್ವಿಯೊಳು ಜನಿಸಿದೆನು ಕೃಷ್ಣ ಕಾರುಣ್ಯ ನಿಧಿ ಎನ್ನ ಕಾಯಬೇಕಯ್ಯ ಹರಿ ವಾರಿಜ ನಾಭ ಶ್ರೀ ಕೃಷ್ಣ ಕಾರುಣ್ಯ ನಿಧಿ ಎನ್ನ ಕಾಯಬೇಕಯ್ಯ ಹರಿ ವಾರಿಜ ನಾಭ ಶ್ರೀ ಕೃಷ್ಣ ಪೂರ್ವ ಜನ್ಮದಲಿ ನಾ ಮಾಡಿದ ಪಾಪದಿಂ ದುರ್ವಿಯೊಳು ಜನಿಸಿದೆನು ಕೃಷ್ಣ ಹುಟ್ಟಿದಂದಿಂದಿಗು ಸುಖವೆಂಬುದನು ಅರಿಯೆ ಕಷ್ಟ ಪಡುತಿಹೆನಯ್ಯ ಕೃಷ್ಣಾ ದಟ್ಟ ದಾರಿದ್ರ್ಯ ವನು ಪರಿಹರಿಸದಿರೆ ದೂರು ತಟ್ಟುವುದು ನಿನಗಯ್ಯ ಕೃಷ್ಣ ಹುಟ್ಟಿದಂದಿಂದಿಗು ಸುಖವೆಂಬುದನು ಅರಿಯೆ ಕಷ್ಟ ಪಡುತಿಹೆನಯ್ಯ ಕೃಷ್ಣಾ ದಟ್ಟ ದಾರಿದ್ರ್ಯವನು ಪರಿಹರಿಸದಿರೆ ದೂರು ತಟ್ಟುವುದು ನಿನಗಯ್ಯ ಕೃಷ್ಣ ಕಾಸಿನ ಆಸೆಯನು ಮಾಡಿ ಬಹುದಿನದಿಂದ ಆಯಾಸದೊಳಗಿಹೆನು ಕೃಷ್ಣ ಆಸೆಯನು ಬಿಡಿಸೆಮಗೆ ದೋಷವನು ಪರಿಹರಿಸು ಸಾಸಿರ ನಾಮದ ಶ್ರೀ ಕೃಷ್ಣ ಆಸೆಯನು ಬಿಡಿಸೆಮಗೆ ದೋಷವನು ಪರಿಹರಿಸು ಸಾಸಿರ ನಾಮದ ಶ್ರೀ ಕೃಷ್ಣ ಪೂರ್ವ ಜನ್ಮದಲಿ ನಾ ಮಾಡಿದ ಪಾಪದಿಂ ದುರ್ವಿಯೊಳು ಜನಿಸಿದೆನು ಕೃಷ್ಣ ಪೂರ್ವ ಜನ್ಮದಲಿ ನಾ ಮಾಡಿದ ಪಾಪದಿಂ ದುರ್ವಿಯೊಳು ಜನಿಸಿದೆನು ಕೃಷ್ಣ ಮುಟ್ಟಲಂಜುವರು ಬಂದುಗಳು ಕಂಡರೆ ಎನ್ನ ಅಟ್ಟಿಕೊಳುತಿಹರಯ್ಯ ಕೃಷ್ಣ ತೊಟ್ಟಿಲ ಶಿಶು ಬಾಯ ಬಿಡುವತೆರೆದಂತೆ ಕಂಗೆಟ್ಟು ಶೋಕಿಸುವೆನು ಕೃಷ್ಣ ಮುಟ್ಟಲಂಜುವರು ಬಂದುಗಳು ಕಂಡರೆ ಎನ್ನ ಅಟ್ಟಿಕೊಳುತಿಹರಯ್ಯ ಕೃಷ್ಣ ತೊಟ್ಟಿಲ ಶಿಶು ಬಾಯ ಬಿಡುವತೆರೆದಂತೆ ಕಂಗೆಟ್ಟು ಶೋಕಿಸುವೆನು ಕೃಷ್ಣ ತಂದೆ ತಾಯಿಯು ಇಲ್ಲ ಬಂಧು ಬಳಗವೂ ಇಲ್ಲ ಇಂದೆನಗೆ ಗತಿಯೇನು ಕೃಷ್ಣ ತಂದೆ ತಾಯಿಯು ಇಲ್ಲ ಬಂಧು ಬಳಗವೂ ಇಲ್ಲ ಇಂದೆನಗೆ ಗತಿಯೇನು ಕೃಷ್ಣ ಮಂದರಧರ ಶ್ರೀ ಪುರಂದರ ವಿಠ್ಠಲ ನೀ ಬಂದು ನೆಲೆಯಾಗಯ್ಯ ಕೃಷ್ಣ ಮಂದರಧರ ಶ್ರೀ ಪುರಂದರ ವಿಠ್ಠಲ ನೀ ಬಂದು ನೆಲೆಯಾಗಯ್ಯ ಕೃಷ್ಣ ಪೂರ್ವ ಜನ್ಮದಲಿ ನಾ ಮಾಡಿದ ಪಾಪದಿಂ ದುರ್ವಿಯೊಳು ಜನಿಸಿದೆನು ಕೃಷ್ಣ ಪೂರ್ವ ಜನ್ಮದಲಿ ನಾ ಮಾಡಿದ ಪಾಪದಿಂ ದುರ್ವಿಯೊಳು ಜನಿಸಿದೆನು ಕೃಷ್ಣ ಕೃಷ್ಣಾ ಕೃಷ್ಣಾ ಕೃಷ್ಣಾ ಕೃಷ್ಣಾ ಕೃಷ್ಣಾ