Janumagale Kaayuve

Janumagale Kaayuve

Raghu Dixit, Raghavendra V Kamath, & Nakul Abhyankar

Длительность: 3:58
Год: 2020
Скачать MP3

Текст песни

ಜನುಮಗಳೇ ಕಾಯುವೆ
ಹೃದಯವನೇ ಹಾಸುವೆ
ಸಮಯದ ಕೊನೆಯಲಿ
ನಿನ್ನದೇ ಜೊತೆಯಲಿ
ಪ್ರೀತಿಯ ಹಾಡನು ಹಾಡುವೆ
ಮನಸಿನ ಕಿಡಿಗೆ ಮಳೆಯು ನೀ ಸುರಿಸು ಬಾ
ತಣಿಸು ಬಾ ಜೀವವೇ ಮರಳಿ ಬಾ
ಜನುಮಗಳೇ ಕಾಯುವೆ
ಹೃದಯವನೇ ಹಾಸುವೆ
ಮರೆತು ಹೋಗದೇ ನನ್ನ ಮನ್ನಿಸು ಎಂದಿದೆ ಮನ
ಸನಿಹ ನನ್ನ ಕಾಣದೆ ನಿನ್ನ ನೆನೆಪು ನಿನ್ನದೇ ದಿನಾ
ಶೂನ್ಯವೇ ಕಂಡಿದೆ ಎಲ್ಲೂ
ಸೋತೆನು ಬಾಳಲಿ ನಾನು
ಕನಸೇ ನೀನು ಕ್ಷಮಿಸಲೇನು ಒಂದೊಮ್ಮೆ ಎದುರು ನಿಲ್ಲು
ಸೊರಗಿದೆ ಜೀವನ ಸಾಯದೆ ಪ್ರತಿಕ್ಷಣ
ಯಾವುದೀ ಬಂಧನ ಬಿಡಿಸು ಬಾ
ಕನಲುವ ಕಂಪನ ತಾಳದೆ ಹೋದೆ ನಾ
ಕಾಡದೆ ಕೊಲ್ಲದೆ ಮರಳಿ ಬಾ
ಜನುಮಗಳೇ ಕಾಯುವೆ
ಹೃದಯವನೇ ಹಾಸುವೆ