Jotheyali
S P Balasubrahmanyam
4:28ಚಿತ್ರ: ಅವಳ ಹೆಜ್ಜೆ ಸಂಗೀತ: ರಾಜನ್ ನಾಗೇಂದ್ರ ಸಾಹಿತ್ಯ: ಚಿ.ಉದಯ್ ಶಂಕರ್ ನಿರ್ದೇಶನ: ಭಾರ್ಗವ ಗಾಯಕರು: ಎಸ್.ಪಿ.ಬಾಲಸುಬ್ರಮಣ್ಯಂ ನೆರಳನು ಕಾಣದ ಲತೆಯಂತೆ, ಬಿಸಿಲಿಗೆಬಾಡಿದ ಹೂವಂತೆ ಸೋತಿದೆ ಈ ಮೊಗವೇಕೆ ಏನು ನಿನ್ನ ಚಿಂತೆ, ಹೇಳೇ ನನ್ನ ಕಾಂತೆ, ಏನು ನಿನ್ನಚಿಂತೆ, ಹೇಳೇ ನನ್ನ ಕಾಂತೆ ನೆರಳನು ಕಾಣದ ಲತೆಯಂತೆ, ಬಿಸಿಲಿಗೆಬಾಡಿದ ಹೂವಂತೆ ಏನು ನಿನ್ನ ಚಿಂತೆ, ಹೇಳೇ ನನ್ನ ಕಾಂತೆ, ಏನು ನಿನ್ನಚಿಂತೆ, ಹೇಳೇ ನನ್ನ ಕಾಂತೆ ನಯನದಲಿ ಕಾಂತಿ ಇಲ್ಲಾ, ತುಟಿಗಳಲಿ ನಗುವೇ ಇಲ್ಲಾ ಸವಿಯಾದ ಮಾತನು ಇಂದೇಕೋ ಕಾಣೆನು ನಿನ್ನ ಮನಸು ನಾನು ಬಲ್ಲೆ, ನಿನ್ನ ವಿಷಯವೆಲ್ಲ ಬಲ್ಲೆ ನೀನೇನು ಹೇಳದೆ, ನಾನೆಲ್ಲಾ ಹೇಳಲೇ ಏನಿಂತ ನಾಚಿಕೆ, ಕಣ್ಣೀರು ಏತಕೆ ನೆರಳನು ಕಾಣದ ಲತೆಯಂತೆ, ಬಿಸಿಲಿಗೆ ಬಾಡಿದಹೂವಂತೆ ಏನು ನಿನ್ನ ಚಿಂತೆ, ಹೇಳೇ ನನ್ನ ಕಾಂತೆ, ಏನು ನಿನ್ನಚಿಂತೆ, ಹೇಳೇ ನನ್ನ ಕಾಂತೆ ಈ ಗುಡಿಯ ದೇವಿ ನೀನು, ಈ ತನುವಾ ಪ್ರಾಣ ನೀನು ಬಾಳಲ್ಲಿ ನೆಮ್ಮದಿ, ನಿನ್ನಿಂದ ಕಂಡೆನು ನೀ ಅಳಲು ನೋಡಲಾರೆ, ನೀ ಇರದೇ ಬಾಳಲಾರೆ ನನ್ನಲ್ಲಿ ಕೋಪವೇ, ನಾ ನಿನಗೆ ಬೇಡವೇ ನೀ ದೂರವಾದರೆ ನನಗಾರು ಆಸರೆ ನೆರಳನು ಕಾಣದ ಲತೆಯಂತೆ, ಬಿಸಿಲಿಗೆಬಾಡಿದ ಹೂವಂತೆ ಸೋತಿದೆ ಈ ಮೊಗವೇಕೆ ಏನು ನಿನ್ನ ಚಿಂತೆ, ಹೇಳೇ ನನ್ನ ಕಾಂತೆ, ಏನು ನಿನ್ನಚಿಂತೆ, ಹೇಳೇ ನನ್ನ ಕಾಂತೆ ನೆರಳನು ಕಾಣದ ಲತೆಯಂತೆ, ಬಿಸಿಲಿಗೆಬಾಡಿದ ಹೂವಂತೆ ಏನು ನಿನ್ನ ಚಿಂತೆ, ಹೇಳೇ ನನ್ನ ಕಾಂತೆ, ಏನು ನಿನ್ನಚಿಂತೆ, ಹೇಳೇ ನನ್ನ ಕಾಂತೆ