Baanina Haniyu
Raghu Dixith
ಬದುಕಿನ ಬಣ್ಣವೇ ಬದಲಾದರೆ ಅದು ಪ್ರೇಮವೇ ಬಡವನ ಕಣ್ಣಲೂ ಬೆಳಕಾದರೇ ಅದು ಪ್ರೇಮವೇ ಕೊರಳಿದು ಕಂಪಿಸಿ ಬಿಗಿಯಾದರೆ ಅದು ಪ್ರೇಮವೇ ತಿರುವಲಿ ದೇವರೇ ಎದುರಾದರೆ ಅದು ಪ್ರೇಮವೇ ಗಾಳಿಯಲಿ ಬೆಚ್ಚನೆ ಅಲೆಯಿದೆ ಹೃದಯಕೆ ಹೇಗೋ ದಾರಿ ಗೊತ್ತಾಗಿದೆ ನಕ್ಷೆಯ ನೀಡದೆ ಬದುಕಿನ ಬಣ್ಣವೇ ಬದಲಾದರೆ ಅದು ಪ್ರೇಮವೇ ಬಡವನ ಕಣ್ಣಲೂ ಬೆಳಕಾದರೇ ಅದು ಪ್ರೇಮವೇ ತಲುಪದ ಕರೆ ನೂರಾರಿವೆ ಬೆರಳಲೇ ಇದೆ ಸಂಭಾಷಣೆ ಕನಸಿಗೂ ಸಹ ಕಂದಾಯವೇ ವಿರಹವೇ ಕಿರು ಸಂಭಾವನೆ ಕಳೆದರೆ ನೀನು ಉಳಿವೆನೇ ನಾನು ನೆಪವಿರದೆ ನಿನ್ನ ಅಪಹರಿಸಿ ತಂದೆ ಉಪಕರಿಸು ಶಿಕ್ಷೆಯ ನೀಡದೆ ಬದುಕಿನ ಬಣ್ಣವೇ ಬದಲಾದರೆ ಅದು ಪ್ರೇಮವೇ ಬಡವನ ಕಣ್ಣಲೂ ಬೆಳಕಾದರೇ ಅದು ಪ್ರೇಮವೇ ಕೊರಳಿದು ಕಂಪಿಸಿ ಬಿಗಿಯಾದರೆ ಅದು ಪ್ರೇಮವೇ ತಿರುವಲಿ ದೇವರೇ ಎದುರಾದರೆ ಅದು ಪ್ರೇಮವೇ ಸಾಸಾಸಾ ಗಗಸಾನಿಸ ಗಗಗಸಾನಿಸ ಪನಿಸಾನಿಸ ಗಸ ಸಗಮಪ ಗಮಪಾನಿ ಪಮಾನಿಗ