Mugulu Nage
V. Harikrishna
4:17ಸಾಗರದ ಅಲೆಗು ದಣಿವು ಪರ್ವತಕು ಬೀಳೋ ಭಯವು ಮಳೆಯ ಹನಿಗು ಬಂತು ನೋಡು ದಾಹ ಶಶಿಗೆ ಕಳಚಿ ಹೊಯ್ತು ಖುಶಿಯ ಸ್ನೇಹ ಹಾರಾಡೊ ಮೋಡವಿಂದು ರೆಕ್ಕೆಗಳ ಮುರಿದು ಕೊಂದು ನಿಂತಿದೆ ಮಂಕಾಗಿ ಸುಮ್ಮನೆ ತಂಗಾಳಿ ಅಂಗಳವು ದಂಗಾಗಿ ಬೆವರಿರೊ ಸೂಚನೆ ಬೆಂಕಿ ಮಳೆಗೆ ಬೆಂದ ಮೇಲೆ ಹೂವು ಹೇಗೆ ತಾನೆ ಕಾಣಬೇಕು ನಗುವು ಬೇಸರದ ರಾಟೆಯು ಎದೆಯಲ್ಲಿ ತಿರುಗಿ ತಿರುಗುವ ಈ ಭೂಮಿಯೆ ನಿಂತಿದೆ ಕೊರಗಿ ಬದುಕಿನ ಹೊಸ ರೂಪದ ಪರಿಚಯವಾಗಿ ಬೆಳಕೆ ಕಳೆದೋಗಿದೆ ಸೂರ್ಯನು ಮುಳುಗಿ ಎಲ್ಲೇ ನೋಡು ಹಳೆ ಗುರುತು ಬಾಳೋದ್ ಹೇಗೆ ಎಲ್ಲ ಮರೆತು ಬಯಸದೆ ನಾ ಎಲ್ಲ ಅಂದು ಬಯಸಿದರು ಇಲ್ಲ ಇಂದು ಈಜುವುದು ಹೇಗೆ ಕುದಿಯೊ ನದಿಯನ್ನ ಚೂಪಾದ ಕಲ್ಲಿಂದ ಚೂರಾಯ್ತು ಕನಸಿನ ದರ್ಪಣ ಕಾಲ ನೀನು ಮಾಯ ಇಲ್ಲ ನಿನಗೆ ನ್ಯಾಯ ವಾಸಿ ಮಾಡೋರ್ಯಾರು ಒಳಗೆ ಆದ ಗಾಯ ನಂಜು ಒಂದು ಹ್ರುದಯ ಸವಾರಿ ಮಂಜು ಕವಿದು ಮೊಬ್ಬು ದಾರಿ ಗೆದ್ದಾಗ ಬೆನ್ನು ತಟ್ಟಿ ಬಿದ್ದಾಗ ಮೇಲೆ ಎತ್ತಿ ಜೊತೆಯಲ್ಲಿ ನಿಲ್ಲೋರಿಲ್ಲ ಒಂಟಿ ನಾ ಆಶೆಗಳ ಕಾಶ ಪಾತಾಳ ಮುಟ್ತಿದೆ ಈ ದಿನ ಸಾಗರದ ಅಲೆಗು ದಣಿವು ಬೆಂಕಿ ಮಳೆಗು ಬೆಂದ ಮೇಲೆ ಹೂವು ಹೇಗೆ ತಾನೆ ಕಾಣಬೇಕು ನಗುವು