Helilla Yaarallu Naanu

Helilla Yaarallu Naanu

Sonu Nigam,Shreya Ghoshal

Альбом: Krishna Rukku
Длительность: 4:15
Год: 2015
Скачать MP3

Текст песни

इश्क़ में जीना भी है
इश्क़ में मरना भी है

(ಧೋಮ್, ಧೋಮ್ತಾ, ಧೋಮ್, ಧೋಮ್ತಾ, ಧೋಮ್, ಧೋಮ್, ಧೋಮ್
ಧೋಮ್, ಧೋಮ್ತಾ, ಧೋಮ್, ಧೋಮ್ತಾ, ಧೋಮ್, ಧೋಮ್
ಧೋಮ್ ಧೋಮ್ತಾ, ಧೋಮ್, ಧೋಮ್ತಾ, ಧೋಮ್, ಧೋಮ್, ಧೋಮ್
ಧೋಮ್, ಧೋಮ್ತಾ, ಧೋಮ್, ಧೋಮ್ತಾ, ಧೋಮ್, ಧೋಮ್)

ಹೇಳಿಲ್ಲ ಯಾರಲ್ಲೂ ನಾನು, ಈ ಗುಟ್ಟಲ್ಲಿ ಶಾಮೀಲು ನೀನು
ಕಣ್ಣಿಂದ ನೀನು ಪಾರಾಗದಂತೆ
ನನ್ನಿಂದ ಎಂದೂ ದೂರಾಗದಂತೆ
ನಿನ್ನಲ್ಲೇ ನಾನೀಗ ಸೆರೆಯಾಗಲೇನು?

(इश्क़ जीना भी है, इश्क़ मरना भी है
इश्क़ तारे-ज़मीं, इश्क़ तूफ़ान है
इश्क़ जीना भी है, इश्क़ मरना भी है
इश्क़ तारे ज़मीं, इश्क़ तूफ़ान है)

ಹೋ, ಹೇಳಿಲ್ಲ ಯಾರಲ್ಲೂ ನಾನು, ಈ ಗುಟ್ಟಲ್ಲಿ ಶಾಮೀಲು ನೀನು

ಗಾಳಿಯೇ ನನ್ನನು ನಿನ್ನೆಡೆ ನೂಕಿದೆ
ಭಾಷೆಗೂ ಮೀರಿದ ಭಾವನೆ ಏಕಿದೆ?
ವಿವರವಾಗಿ ನೋಟವೇ ವರದಿಯನ್ನು ನೀಡಿದೆ
ನನಗೆ ನೀನೇ ಬೇಕಿದೆ

(इश्क़ जीना भी है, इश्क़ मरना भी है
इश्क़ तारे-ज़मीं, इश्क़ तूफ़ान है)

ಈಗಂತು ಗಾಯಾಳು ನಾನು
ಈ ಗುಟ್ಟಲ್ಲಿ ಶಾಮೀಲು ನೀನು
ಈ ಪ್ರೀತಿ ಈಗ ಅತಿಯಾಗುವಂತೆ
ನನ್ನನ್ನು ನೀನು ಹುಡುಕಾಡುವಂತೆ
ಆಗಾಗ ಒಂಚೂರು ಮರೆಯಾಗಲೇನು?

ಮೆಲ್ಲನೆ ತಿದ್ದು ಬಾ ಮುತ್ತಿನ ಅಕ್ಷರ
ಸ್ವಪ್ನವೇ ಸಿಕ್ಕಿದೆ ಇದ್ದರೂ ಎಚ್ಚರ
ಚೆಲುವೆ ನಿನ್ನ ಕೂಗುತ
ಚಕಿತನಾಗಿ ನೋಡುತ
ಬದುಕಬಲ್ಲೆ ಸಾಯುತ

(इश्क़ जीना भी है, इश्क़ मरना भी है
इश्क़ तारे-ज़मीं, इश्क़ तूफ़ान है)

ಹೇಳಿಲ್ಲ ಯಾರಲ್ಲೂ ನಾನು
ಈ ಗುಟ್ಟಲ್ಲಿ ಶಾಮೀಲು ನೀನು
ಕಣ್ಣಿಂದ ನೀನು ಪಾರಾಗದಂತೆ
ನನ್ನಿಂದ ಎಂದೂ ದೂರಾಗದಂತೆ
ನಿನ್ನಲ್ಲೇ ನಾನೀಗ ಸೆರೆಯಾಗಲೇನು?