Muthu Kodolu Bandaga Ft. Ramesh Aravind, Prema, Kasthuri (Feat. Ramesh Aravind, Prema & Kasthuri)

Muthu Kodolu Bandaga Ft. Ramesh Aravind, Prema, Kasthuri (Feat. Ramesh Aravind, Prema & Kasthuri)

Unni Krishnan,Hamsalekha

Альбом: Thuththa Muththa
Длительность: 4:17
Год: 1998
Скачать MP3

Текст песни

ಮುತ್ತು ಕೊಡೋಳು ಬಂದಾಗ, ತುತ್ತು ಕೊಟ್ಟೋಳ ಮರಿಬೇಡ

ಆಟೋ ಲಾರಿ ಹಿಂದೆ ಬರೆದೋನೆ ತತ್ವಜ್ಞಾನಿ ಅಂತಾ ತಿಳಿಬೇಡ

ತಾಯಿ ಇಲ್ಲದೆ ಜಗವಿಲ್ಲ ಮಡದಿ ಇಲ್ಲದೆ ಬಾಳಿಲ್ಲ
ತುತ್ತಾ ಮುತ್ತಾ ಗೊತ್ತಾ, ಅತ್ತ ಇತ್ತ ಎತ್ತ
ಮುತ್ತು ಕೊಡೋಳು ಬಂದಾಗ, ತುತ್ತು ಕೊಟ್ಟೋಳ ಮರಿಬೇಡ
ಆಟೋ ಲಾರಿ ಹಿಂದೆ ಬರೆದೋನೆ ತತ್ವಜ್ಞಾನಿ ಅಂತಾ ತಿಳಿಬೇಡ

ಮಗುವು ಅತ್ತರೆ ತಾನತ್ತು ಹಾಲನೆರೆದವಳು ತಾಯಲ್ಲವೇ
ನಮಗಾಗಿ ಜೀವವೇ ತೇದಿಲ್ಲವೇ

ತಾಳಿ ಪಾಶಕೆ ತಲೆಕೊಟ್ಟು ಗಂಡಿನರ್ಧವೇ ತಾನಾಗಿ
ಸತಿ ನಮಗೆ ಮೀಸಲೇ ಆಗಿಲ್ಲವೇ
ಇಬ್ಬರೂ ಕಂಡಿಹರು ಈ ಗಂಡಿನ ಬೆತ್ತಲೆಯ
ಇಬ್ಬರೂ ಬೆಳಗುವರು ಹೃದಯದ ಕತ್ತಲೆಯ
ತಾಯಿ ಇಲ್ಲದೆ ಬಲವಿಲ್ಲ, ಮಡದಿ ಇಲ್ಲದೆ ಛಲವಿಲ್ಲ
ತುತ್ತಾ ಮುತ್ತಾ ಗೊತ್ತಾ ಅತ್ತ ಇತ್ತ ಎತ್ತ

ಕುಂತಿ ಇಲ್ಲದೆ ಪಾಂಡವರೇ, ದ್ರೌಪದಿ ಇಲ್ಲದೆ ಭಾರತವೇ
ಗಂಡು ಇಬ್ಬರ ಸ್ವತ್ತಲ್ಲವೇ

ನಮ್ಮ ಜನ್ಮಕೆ ಈ ಹೆಣ್ಣು ನಮ್ಮ ಮರಿಯ ಜನ್ಮಕೆ ಆ ಹೆಣ್ಣು
ನಮಗೆರಡು ಕಣ್ಣು ಎರಡು ಹೆಣ್ಣು
ಮೂಡಣದ ಸೂರ್ಯ ತಾಯಿಯ ಮಡಿಲಂತೆ
ಪಡುವಣ ಸೂರ್ಯ ಮಡದಿಯ ಮಡಿಲಂತೆ
ತಾಯಿ ಇಲ್ಲದೆ ತವರಿಲ್ಲ ಮಡದಿ ಇಲ್ಲದೆ ಮನೆಯಿಲ್ಲ
ತುತ್ತಾ ಮುತ್ತಾ ಗೊತ್ತಾ, ಅತ್ತ ಇತ್ತ ಎತ್ತ

ಮುತ್ತು ಕೊಡೋಳು ಬಂದಾಗ, ತುತ್ತು ಕೊಟ್ಟೋಳ ಮರಿಬೇಡ
ಆಟೋ ಲಾರಿ ಹಿಂದೆ ಬರೆದೋನೆ ತತ್ವಜ್ಞಾನಿ ಅಂತಾ ತಿಳಿಬೇಡ
ತುತ್ತಾ ಮುತ್ತಾ ಗೊತ್ತಾ, ಅತ್ತ ಇತ್ತ ಎತ್ತ