Hesaru Poorthi

Hesaru Poorthi

Vani Harikrishna

Длительность: 3:30
Год: 2011
Скачать MP3

Текст песни

ಹೆಸರು ಪೂರ್ತಿ ಹೇಳದೇ ತುಟಿಯ ಕಚ್ಚಿಕೊಳ್ಳಲೇ
ಹರೆಯ ಏನೋ ಹೇಳಿದೇ ಹಣೆಯ ಚಚ್ಚಿಕೊಳ್ಳಲೇ
ಮನಸು ತುಂಬಾ ಮಾಗಿದೆ ಕೊಟ್ಟುಬಿಡಲೇ
ನಗುತಿದೆ ನದಿ ಇದು ಯಾಕೆ ನೋಡುತ ನನ್ನನ್ನು
ಹೃದಯವು ಹೆದರಲೇಬೇಕೆ ಬಯಸಲು ನಿನ್ನನ್ನು

ಹೆಸರು ಪೂರ್ತಿ ಹೇಳದೇ ತುಟಿಯ ಕಚ್ಚಿಕೊಳ್ಳಲೇ
ಹರೆಯ ಏನೋ ಹೇಳಿದೇ ಹಣೆಯ ಚಚ್ಚಿಕೊಳ್ಳಲೇ
ಮನಸು ತುಂಬಾ ಮಾಗಿದೆ ಕೊಟ್ಟುಬಿಡಲೇ

ಎಳೆ ಬಿಸಿಲ ಸಂಕೋಚವು ನೀ ನಗಲು ಮೈ ತಾಕಿದೆ
ನನ ಬೆನ್ನು ನಾಚುತಿಹುದು ನೋಡುತಿರಲು ನೀ ನನ್ನ ಕಡೆಗೆ
ಬಯಕೆ ಬಂದು ನಿಂತಿದೆ ಉಗುರು ಕಚ್ಚಿಕೊಳ್ಳಲೇ
ಬೇರೆ ಏನು ಕೇಳದೇ ತುಂಬಾ ಹಚ್ಚಿಕೊಳ್ಳಲೇ
ಹೇಳದಂಥ ಮಾತಿದೆ ಮುಚ್ಚಿ ಇಡಲೇ

ನಿನ್ನ ತುಂಟ ಕಣ್ಣಲ್ಲಿದೆ ಮಡಚಿಟ್ಟ ಆಕಾಶವು
ಬಿಡಿ ಹೂವಿನ ಮೌನವು ನನ್ನೆದೆಯಲಿ ನಾ ಏನೆನ್ನಲಿ
ತುಂಬ ಮುತ್ತು ಬಂದಿದೆ ಒಮ್ಮೆ ದೃಷ್ಟಿ ತೆಗೆಯಲೇ
ನನಗೆ ಬುದ್ಧಿ ಎಲ್ಲಿದೇ ಒಮ್ಮೆ ಕಚ್ಚಿನೋಡಲೇ
ನಿನ್ನ ತೋಳು ನನ್ನದೇ ಇದ್ಧು ಬಿಡಲೇ