Kamanu Darling Ft.V.Ravichandran, Roja (Feat. V.Ravichandran & Roja)
Hamsalekha,S.P.Balasubramanyam, K.S.Chitra
4:34Hamsalekha,S.P.Balasubramanyam, K.S.Chitra
(ಕುಂಕುಮ ಅರ್ಧವಿದೆ ಕೈ ಬಳೆ ಕಮ್ಮಿ ಇದೆ ಬೈತಲೆ ಕೆಟ್ಟಿದೆ ಗಲ್ಲವು ಕಟ್ಟಿದೆ ಎಲ್ಲಿಗೆ ಹೋಗಿದ್ದೀಯೇ? ಕಾಲುಗಳು ಬೀಗುತಿವೆ ಕಂಗಳು ತೇಗುತಿವೆ ಸೊಂಟವು ಜಗ್ಗದೆ ಹೆಣ್ಣಿದೆ ಹಿಗ್ಗಿದೆ ಯಾಕ್ಹಿಂಗೆ ಮಾಗಿದ್ದೀಯೇ) ರಾಗಿ ಹೊಲದಾಗೆ ಖಾಲಿ ಗುಡಿಸಲು ಗುಡಿಸಲಿಗೆ ಹೋದೆ ಮಾತನಾಡಲು ನನ್ನ ಪತಿರಾಯರಿಗೆ ತಿನಿಸಲು ಜೇನು ತುಪ್ಪ ತಂದೆ ಮಾತು ಬರಿಸಲು ತುಂಬಾ ಹೊಸ ಮಾತು ಕಳಿಸಿ ಕೊಟ್ಟಳಮ್ಮ ಜೇನು ತುಪ್ಪ ತೊಟ್ಟು ಕೊಡು ಎಂದಳಮ್ಮ ರಾಗಿ ಹೊಲದಾಗೆ ಖಾಲಿ ಗುಡಿಸಲು ಗುಡಿಸಲಿಗೆ ಹೋದೆ ಮಾತನಾಡಲು (ತಾಳಿಯು ಬೆನ್ನಲಿದೆ ಸತ್ಯವು ಕಾಣುತಿದೆ ಕತ್ತಲು ಕಾಯದೆ ಲೋಕವ ನೋಡದೆ ಏನನ್ನು ಮಾಡಿದ್ದೀಯೇ?) ನನ್ನ ಪುಟ್ಟ ಪತಿರಾಯ ಪುಟವಿತ್ತ ಚೆನ್ನಿಗರಾಯ ಕೇಳಿರಿ ಹತ್ತಿರಕೆ ಬಾ ಎಂದರೂ ಬೇಡ ಅಂದ್ರೆ ಬಿಟ್ಟು ಕೊಟ್ಟರು ತಿಳಿಯಿರಿ ನೀನು ತಾನೇ ಅಸೆ ತಂದೆ ನೀನು ಯಾಕೆ ಜೇನು ತಿಂದೆ ಹೌದು ತಿಂದೆ ಎನ್ನು ಮುಂದೆ ನಾನು ತಾಯಿ ನೀನು ತಂದೆ ಕೂಸಿಲ್ಲದೇನೆ ತಾಯಾಸೆ ಏನೇ ಬಾ ಬಿಡಿಸು ಈ ಒಗಟನು ಓ ಮುಂದೇನೋ ನಾ ಅರಿಯನು ರಾಗಿ ಹೊಲದಾಗೆ ಖಾಲಿ ಗುಡಿಸಲು ಗುಡಿಸಲಿಗೆ ಹೋದೆ ಮಾತು ಕೇಳಲು ತನ್ನ ಪತಿರಾಯನಿಗೆ ತಿನಿಸಲು ತಂದ ಜೇನು ತಿಂದೆ ಮಾತು ಕಲಿಯಲು ತುಂಬಾ ಹೊಸ ಮಾತು ಕಲಿತುಕೊಂಡರಮ್ಮ ಜೇನು ತಿಂದು ನೀನು ತಿನ್ನು ಎಂದರಮ್ಮ ರಾಗಿ ಹೊಲದಾಗೆ ಖಾಲಿ ಗುಡಿಸಲು ಗುಡಿಸಲಿಗೆ ಹೋದೆ ಮಾತು ಕೇಳಲು (ಪಂಚೆಯ ಅಂಚು ಎಲ್ಲಿ ನಂಗನ ಮೂತಿಯಲ್ಲಿ ಬಟ್ಟೆಗಳೆಲ್ಲವೂ ತಿರುವು ಮುರುವು ಏನೇನೊ ಸಾಗಿತಲ್ಲೇ? ದೂರದಿಂದ ನೋಡಿದರು ಸಣ್ಣ ಪದ ಹಾಡಿದರು ಕೇಳಿರಿ ಕಣ್ಣುಗಳ ಹೊಗಳಿದರು ತಾಳಿ ನಿದ್ರೆ ನಿಲ್ಲಿಸಿದರು ತಿಳಿಯಿರಿ ನೀನು ತಾನೇ ಹಾಡು ಎಂದೇ ಯಾಕೆ ನನ್ನ ಪ್ರಾಣ ಎಂದೇ ಪ್ರೀತಿಯಿಂದ ಹಾಗೇ ಅಂದೇ ನಾವು ಇನ್ನು ಪ್ರೀತಿ ಹಿಂದೆ ಈ ಪ್ರೇಮ ಪಾಠ ಈ ಜೇನಿನೂಟ ಈ ತಲೆಗೆ ಈಗೇರಿತು ಓ ಚೆಲುವೆ ಏನಾಯಿತು ರಾಗಿ ಹೊಲದಾಗೆ ಖಾಲಿ ಗುಡಿಸಲು ಗುಡಿಸಲಿಗೆ ಹೋದೆ ಮಾತನಾಡಲು ತನ್ನ ಪತಿರಾಯನಿಗೆ ತಿನಿಸಲು ತಂದ ಜೇನು ತಿಂದೆ ಮಾತು ಕಲಿಯಲು ತುಂಬಾ ಹೊಸ ಮಾತು ಕಲಿತುಕೊಂಡರಮ್ಮ ಜೇನು ತಿಂದು ನೀನು ತಿನ್ನು ಎಂದರಮ್ಮ ರಾಗಿ ಹೊಲದಾಗೆ ಖಾಲಿ ಗುಡಿಸಲು ಗುಡಿಸಲಿಗೆ ಹೋದೆ ಮಾತು ಕೇಳಲು