Eno Ide
Raghu Dixit
5:43ಪ್ರೀತಿಯ, ಮನಶಾಂತಿಯ, ಸಿರಿಹೊನ್ನಿನ ನಾಡಿದು ಹಸಿರು ವನಗಳ, ತಂಪು ನದಿಗಳ ಸುಂದರ ಬೀಡಿದು ಲೋಕವೇ ಒಂದಾಗುವ ಸಂಗಮ ಭೇದವೇ ಇಲ್ಲದ ಹಿರಿತನ ನಾಳಿನ ಹೊಸ ಆಶಾಕಿರಣ ನಮ್ಮ ನಾಡು, ಕರುನಾಡು ನಮ್ಮ ನಾಡು, ಕರುನಾಡು ಕಡಲಿನ, ಮಲೆ ಮಡಿಲಿನ, ಬಿಸಿ ಬಯಲಿನ ತವರಿದು ಬೆವರ ಹನಿಗಳು, ವಿವಿಧ ದನಿಗಳು ಎಳೆಯುವ ದೇರಿದು ಜ್ಞಾನದ, ಪರಿಕಾನದ ಹಂಬಲ ಚಿಗುರಿಗೆ ಬೇರಿನ ಬೆಂಬಲ ಮಮತೆಯ, ಸಮತೆಯ ಅಂಗಳ ನಮ್ಮ ನಾಡು, ಕರುನಾಡು ನಮ್ಮ ನಾಡು, ಕರುನಾಡು (ಗಂಧದ ಸತ್ಯ) ನಮ್ಮ ನಾಡು (ಅಂದದ ನೃತ್ಯ) ಕರುನಾಡು (ಗಂಧದ ಸತ್ಯ) ನಮ್ಮ ನಾಡು (ಅಂದದ ನೃತ್ಯ) ಕರುನಾಡು