Manase Manase
Rajesh Krishnan
6:16ನೀ ಮುದ್ದಾದ ಮಾಯಾವಿ ನೀ ಪ್ರೀತಿಲಿ ಮೇಧಾವಿ ಮೆಲ್ಲ ಮೆಲ್ಲ ಮತ್ತೇರಿದಂತೆ ಯಾರೋ ನನ್ನ ಮುದ್ದಾಡಿದಂತೆ ಹಾಳಾದೆ ಹಾಡುಹಗಲೇ ಹಾದಿ ಮುಳ್ಳು ಅಂಗಾಲಲ್ಲಿ ನುಗ್ಗಿ ಕೂತಂತೆ ನನ್ನ ಜೀವ ಹೊಕ್ಕಿ ಹೆಂಗೆ, ಕಳ್ಳ, ನೀ ಕುಂತೆ? ಮುಂಗಾರಲ್ಲಿ ಭೂಮಿ ಸೀಳಿ ಮೊಳಕೆ ಬಂದಂತೆ ಹೇಗೋ, ಏನೋ, ನನ್ನ ಮನಸ ನಲ್ಲೆ ನೀ ನಿಂತೆ ನಾನೊಂದು ಕಲ್ಲಂತೆ ಬೆಳೆದೆನು ನೀ ಸೋಕಿ ಜೀವಂತ ಆದೆನು ಮೊಗ್ಗನ್ನು ಹೂ ಮಾಡೋ ಸೂರ್ಯನು ನಿನ್ನಲ್ಲಿ ನಂಗೀಗ ಕಂಡನು ಕೊಂದೇ ಬಿಡು ನನ್ನನು ನಿನ್ನ ಕಿಡಿ ನೋಟದಿ ಸುಳಿದರೂ, ನೀ ಸರಿದರೂ ನಂಗೇನೋ ಚಡಬಡಿಕೆ ಮುಂಗಾರಲ್ಲಿ ಭೂಮಿ ಸೀಳಿ ಮೊಳಕೆ ಬಂದಂತೆ ಹೇಗೋ, ಏನೋ, ನನ್ನ ಮನಸ ನಲ್ಲೆ ನೀ ನಿಂತೆ ಬಿರುಗಾಳಿಯ ಹೋಲೊ ಹುಡುಗನು ನಂಗೀಗ ತಂಗಾಳಿ ಆದನು ಮುಂಜಾನೆ ಕನಸಂತ ಹುಡುಗಿಯು ನಿಜವಾಗಿ ನನ ಸ್ವಂತ ಆದಳು ನಿನ್ನ ಸಿಹಿ ಕಾಟಕೆ ಜೀವ ಪರದಾಡಿದೆ ಮರೆಸುವೆ, ಮೈ ಮರೆಸುವೆ, ನೀ ನನ್ನ ಅರವಳಿಕೆ ಹಾದಿ ಮುಳ್ಳು ಅಂಗಾಲಲ್ಲಿ ನುಗ್ಗಿ ಕೂತಂತೆ ನನ್ನ ಜೀವ ಹೊಕ್ಕಿ ಹೆಂಗೆ, ಕಳ್ಳ, ನೀ ಕುಂತೆ? ನೀ ಮುದ್ದಾದ ಮಾಯಾವಿ ನೀ ಪ್ರೀತಿಲಿ ಮೇಧಾವಿ ಮೆಲ್ಲ ಮೆಲ್ಲ ಮತ್ತೇರಿದಂತೆ ಯಾರೋ ನನ್ನ ಮುದ್ದಾಡಿದಂತೆ ಹಾಳಾದೆ ಹಾಡುಹಗಲೇ