Neene Sakidha Gini (From "Manasa Sarovara")

Neene Sakidha Gini (From "Manasa Sarovara")

S P Balasubrahmanyam

Длительность: 4:29
Год: 2025
Скачать MP3

Текст песни

ನೀನೇ, ಸಾಕಿದ ಗಿಣಿ
ನಿನ್ನಾ ಮುದ್ದಿನ ಗಿಣಿ
ಹದ್ದಾಗಿ ಕುಕ್ಕಿತಲ್ಲೋ
ನಿನ್ನಾ ಹದ್ದಾಗಿ ಕುಕ್ಕಿತಲ್ಲೋ

ನೀನೇ, ಸಾಕಿದ ಗಿಣಿ
ನಿನ್ನಾ ಮುದ್ದಿನ ಗಿಣಿ

ಚಿನ್ನಾದ ಚೂರಿ ಚೆಂದಾವ ತೋರಿ
ಚಿನ್ನಾದ ಚೂರಿ ಚೆಂದಾವ ತೋರಿ
ಬೆನ್ನಲ್ಲೇ ತೂರಿತಲ್ಲೋ
ಬೆನ್ನಲ್ಲೇ ತೂರಿತಲ್ಲೋ
ನೆತ್ತಾರ ಹೀರಿತಲ್ಲೋ
ನಿನ್ನ ನೆತ್ತಾರ ಹೀರಿತಲ್ಲೋ

ನೀನೇ, ಸಾಕಿದ ಗಿಣಿ
ನಿನ್ನಾ ಮುದ್ದಿನ ಗಿಣಿ

ಬೀಸೋಗಾಳಿ ಬಿರುಗಾಳಿಯಾಗಿ
ಬೀಸೋಗಾಳಿ ಬಿರುಗಾಳಿಯಾಗಿ
ಬೆಂಕಿಯ ಮಳೆತಂತಲ್ಲೋ
ಬೆಂಕಿಯ ಮಳೆತಂತಲ್ಲೋ
ಬೆಂಕೀಲಿ ಬೆಂದೆಯಲ್ಲೋ
ಉರಿ ಬೆಂಕೀಲಿ ಬೆಂದೆಯಲ್ಲೋ

ನೀನೇ, ಸಾಕಿದ ಗಿಣಿ
ನಿನ್ನಾ ಮುದ್ದಿನ ಗಿಣಿ

ಹೂವಾಗಿ ಅರಳಿ ಹಾವಾಗಿ ಕೆರಳಿ
ಹೂವಾಗಿ ಅರಳಿ ಹಾವಾಗಿ ಕೆರಳಿ
ಪ್ರಾಣಾವ ಹಿಂಡಿತಲ್ಲೋ
ಪ್ರಾಣಾವ ಹಿಂಡಿತಲ್ಲೋ
ಎದೆಯಲ್ಲ ಸಿಡಿಯಿತಲ್ಲೋ
ನಿನ್ನ ನುಗುವೆಲ್ಲ ಉಡುಗಿತಲ್ಲೋ

ನೀನೇ, ಸಾಕಿದ ಗಿಣಿ
ನಿನ್ನಾ ಮುದ್ದಿನ ಗಿಣಿ
ಹದ್ದಾಗಿ ಕುಕ್ಕಿತಲ್ಲೋ
ನಿನ್ನಾ ಹದ್ದಾಗಿ ಕುಕ್ಕಿತಲ್ಲೋ
ಹದ್ದಾಗಿ ಕುಕ್ಕಿತಲ್ಲೋ
ನಿನ್ನಾ ಹದ್ದಾಗಿ ಕುಕ್ಕಿತಲ್ಲೋ