Meghave Meghave Ft. Vishnuvardan, Ramesh, Gurlin Chopra (Feat. Vishnuvardan, Ramesh & Gurlin Chopra)

Meghave Meghave Ft. Vishnuvardan, Ramesh, Gurlin Chopra (Feat. Vishnuvardan, Ramesh & Gurlin Chopra)

S P Balasubramanyam,Aunradha Sriram,Deva,V Nagendra Prasad

Альбом: Vishnu Sena
Длительность: 5:20
Год: 2022
Скачать MP3

Текст песни

ಮೇಘವೇ ಮೇಘವೇ ಸೋನೆಯ ಸುರಿಸು
ಗಂಧವೇ ಗಂಧವೇ ಪರಿಮಳ ಹರಿಸು
ರವಿಯೇ ರವಿಯೇ ಆರತಿ ಬೆಳಗು
ಮಾಮರ ಮಾಮರ ತೋರಣವಾಗು
ಇಂದಿರನು ಚಂದಿರನು ಏಣಿ ಇಲ್ಲದವನು
ಕನ್ನಡ ತಾಯಿಯ ಮುದ್ದು ಮುದ್ದು ಮಗನು

ಎದುರಲ್ಲಿ ದೇವರ ನೋಡಿದೆ

ಮಕ್ಕಳಲ್ಲಿ ದೇವರ ನೋಡಿದೆ

ಮೇಘವೇ ಮೇಘವೇ ಸೋನೆಯ ಸುರಿಸು
ಗಂಧವೇ ಗಂಧವೇ ಪರಿಮಳ ಹರಿಸು
ರವಿಯೇ ರವಿಯೇ ಆರತಿ ಬೆಳಗು
ಮಾಮರ ಮಾಮರ ತೋರಣವಾಗು

ನೀ ನಡೆಯುವ ನಡೆಯೇ ಸೊಬಗು
ನಿನ್ನ ನಗುವಲಿ ಮಗುವಿನ ಬೆರಗು
ಆ ನಗುವನು ನೋಡಲು ಸೂರ್ಯ ದಿನಾ ಹುಟ್ಟುವ

ನನ್ನ ಹೊಗಳಿಕೆ ಸಾಕು ಇನ್ನು
ಭಗವಂತನ ಆಣತಿ ನಾನು
ಎಳೆ ಮಕ್ಕಳ ಮನಸುಗಳೆಲ್ಲಾ ದೇವರಲ್ಲವಾ

ಕೂ ಕೂ
ಕುಕ್ಕುಕ್ಕೂ
ಕೋಗಿಲೆ ಕೋಗಿಲೆ ನನ್ನ ಅಭಿನಂದನೆ ಹೇಳು
ಗಿಳಿಯೇ ಗಿಳಿಯೇ ನನ್ನ ಅಭಿಮಾನ ಹೇಳು
ಪುರುಷೋತ್ತಮ ಇವನು ಸರ್ವೋತ್ತಮ ಇವನು
ನನಗೇ ಇವ ಮೀಸಲು

ಎದುರಲ್ಲಿ ದೇವರ ನೋಡಿದೆ

ಮಕ್ಕಳಲ್ಲಿ ದೇವರ ನೋಡಿದೆ

ಮೇಘವೇ ಮೇಘವೇ ಸೋನೆಯ ಸುರಿಸು
ಗಂಧವೇ ಗಂಧವೇ ಪರಿಮಳ ಹರಿಸು

ನೆರಳಿರದಿರೋ ನೆರಳು ಇವನು
ಪ್ರತಿ ಬಡವನ ಕೊರಳು ಇವನು
ನಾ ಬಯಸಿದ ಚೆಲುವ ಇವನು, ವರದಾನವೂ

ಕುಲ ಬೇಧವ ಅರಿಯದ ಮನಸು
ಪ್ರತಿ ವಿಷಯಗಳ ಅರಿಯುವ ವಯಸ್ಸು
ಈ ಮಕ್ಕಳ ಜೊತೆಯಲಿ ಸೊಗಸೂ, ಪ್ರತಿ ಜನ್ಮವು

ಗಿಣಿಯೇ ಗಿಣಿಯೇ ನನ್ನ ಕನಸೇ ಅವನಲ್ಲವೇ
ಗಾಳಿ ಗಾಳಿ ನಾ ಮೊದಲಿನ ಹಾಗಿಲ್ಲವೇ
ಈ ಬಾಳಿಗಾನಂದ ಉತ್ಸಾಹವಾ ತಂದು ನನ್ನ ಜೀವನ ಮೀಸಲು

ಎದುರಲ್ಲಿ ದೇವರ ನೋಡಿದೆ

ಮಕ್ಕಳಲ್ಲಿ ದೇವರ ನೋಡಿದೆ

ಮೇಘವೇ ಮೇಘವೇ ಸೋನೆಯ ಸುರಿಸು
ಗಂಧವೇ ಗಂಧವೇ ಪರಿಮಳ ಹರಿಸು
ರವಿಯೇ ರವಿಯೇ ಆರತಿ ಬೆಳಗು
ಮಾಮರ ಮಾಮರ ತೋರಣವಾಗು
ಇಂದಿರನು ಚಂದಿರನು ಏಣಿ ಇಲ್ಲದವನು
ಕನ್ನಡ ತಾಯಿಯ ಮುದ್ದು ಮುದ್ದು ಮಗನು

ಎದುರಲ್ಲಿ ದೇವರ ನೋಡಿದೆ

ಮಕ್ಕಳಲ್ಲಿ ದೇವರ ನೋಡಿದೆ

ಮೇಘವೇ ಮೇಘವೇ ಸೋನೆಯ ಸುರಿಸು
ಗಂಧವೇ ಗಂಧವೇ ಪರಿಮಳ ಹರಿಸು
ರವಿಯೇ ರವಿಯೇ ಆರತಿ ಬೆಳಗು
ಮಾಮರ ಮಾಮರ ತೋರಣವಾಗು