Minchagi Neenu
Sonu Nigam
4:27ಸಂಜು ಮತ್ತು ಗೀತಾ ಸೇರಬೇಕು ಅಂತಾ ಬರೆದಾಗಿದೆ ಇಂದು ಬ್ರಹ್ಮನೂ ನನ್ನ ಜೀವಕ್ಕಿಂತಾ ನೀನೆ ನನ್ನ ಸ್ವಂತಾ ಇರುವಾಗ ನಾನು ಚಿಂತೆ ಏನು? ನಿನ್ನ ಎಲ್ಲಾ ನೋವನ್ನು ಕೊಡುಗೆ ನೀಡು ನನಗಿನ್ನು ನನ್ನ ಎಲ್ಲಾ ಖುಷಿಯನ್ನು ಕೊಡುವೇ ನಿನ್ನ ವಶಕಿನ್ನು ಮಳೆಯಾ ಹನಿ ಉರುಳೋ ದನಿ ತರವೇ? ನಗಬಾರದೇ ನಗಬಾರದೇ ನನ್ನೊಲವೇ? ಸಂಜು ಮತ್ತು ಗೀತಾ ಸೇರಬೇಕು ಅಂತಾ ಬರೆದಾಗಿದೆ ಇಂದು ಬ್ರಹ್ಮನೂ ಆ ಕಣ್ಣಿಗೊಂದು ಈ ಕಣ್ಣಿಗೊಂದು ಸ್ವರ್ಗಾನ ತಂದು ಕೊಡಲೇನು ಇಂದು ಏನಾಗಲಿ ನನ್ನ ಸಂಗಾತಿ ನೀ ನಿನ ಈ ಕಣ್ಣಲೀ ಇದೆ ಕೊನೆಯಾ ಹನಿ ಎದೆಯ ಗೂಡಿನಲ್ಲಿ ಪುಟ್ಟ ಗುಬ್ಬಿಯಂತೆ ನಿನ್ನ ಬೆಚ್ಚನೆಯ ಪ್ರೀತಿ ಕೊಟ್ಟು ಬಚ್ಚಿ ಇಡುವೆ ಚಿನ್ನ ಇತಿಹಾಸದ ಪುಟ ಕಾಣದ ಒಲುಮೆ ನೀಡುವೇ ಮಳೆಯಾ ಹನಿ ಉರುಳೋ ದನಿ ತರವೇ? ನಗಬಾರದೇ ನಗಬಾರದೇ ನನ್ನೊಲವೇ? ಸಂಜು ಮತ್ತು ಗೀತಾ ಸೇರಬೇಕು ಅಂತಾ ಬರೆದಾಗಿದೆ ಇಂದು ಬ್ರಹ್ಮನೂ ಕಂಡಿಲ್ಲ ಯಾರು ಆ ದೇವರನ್ನು ಇರಬಹುದು ಏನೋ ನಿನ್ನಂತೆ ಅವನು ಗೆಳೆಯಾಯೆಂದರೇ ಅದಕೂ ಹತ್ತಿರ ಇನಿಯಾಯೆಂದರೇ ಅದಕೂ ಎತ್ತರ ಒರಗಿ ಕೊಳ್ಳಲೇನು ನಿನ್ನ ಎದೆಗೆ ಒಮ್ಮೆ ನಾನು ಕರಗಿ ಹೋಗಲೇನು ನಿನ್ನ ಕರಗಳಲ್ಲಿ ನಾನು ಯುಗದಾಚೆಗೂ ಜಗದಾಚೆಗೂ ಜೊತಗೆ ಸಾಗುವೆ ಕಡಲೆಲ್ಲವ ಅಲೆ ಸುತ್ತುವ ತರವೇ ನಿನ ಸೇರುವೆ ನಿನ ಸೇರುವೆ ನನ್ನೊಲವೇ ಸಂಜು ಮತ್ತು ಗೀತಾ ಸೇರಬೇಕು ಅಂತಾ ಬರೆದಾಗಿದೆ ಇಂದು ಬ್ರಹ್ಮನೂ