Mundiri Paadam
Udit Narayan, Sujatha
4:48ನಾ ಕಾಣೋ ಲೋಕವನ್ನು ಕಾಣೋರು ಯಾರು? ನಾ ಕಾಣೋ ಲೋಕವನ್ನು ಕಾಣೋರು ಯಾರು? ಹೇಳುವೆಯಾ ನೀ, ಓ ಇಬ್ಬನಿಯೇ ಮೆಲ್ಲನೆ ಹೇಳು, ಓ ಮಲ್ಲಿಗೆಯೇ ನನ್ನ ಕಾಣೋ ಭೂಮೀ ತಾಯೆ ನಿನ್ನ ನೋಡಲು ನನಗೆ ಇನ್ನೊಂದು ಜನ್ಮವು ಬೇಕು ಬಾನಾಡಿಯ ಹಾಗೆ ನಾ ಹಾಡಿ ಬದುಕಿರಲುಬೇಕು ನಾ ಕಾಣೋ ಲೋಕವನ್ನು ಕಾಣೋರು ಯಾರು? ಅರಳಿದ ಹೂಗಳ ನೋಡದೆ ಹೋದರೂ ಆ ನಗೆ ನಾನರಿವೆ ಹರಿಯುವ ನದಿಗಳ ಕಾಣದೆ ಹೋದರೂ ಸ್ಪರ್ಶದಿ ನಾ ತಿಳಿವೆ ಕು, ಕುಹು ಕೂಗುವ ಕೋಗಿಲೆ ಗುಂಪಿನ ಇಂಪಲಿ ನಾನಿರುವೆ ಕಲ್ಪನೆ ಲೋಕದ ಬೆನ್ನನು ಏರೀ ರೆಕ್ಕೆಯ ನಾ ಪಡೆವೆ ನೋವಿಲ್ಲ ನಿಮ್ಮನು ನಾ ನೋಡದೆ ಹೋದರೂ ನೀವು ನನ್ನಾ ನೋಡಿದರೇ ಸಾಕಲ್ವೇ ಅದು ನಿಮ್ಮ ಮುಂದೇ ಗಾಯಕ ನಾ ನಾ ಕಾಣೋ ಲೋಕವನ್ನು ಕಾಣೋರು ಯಾರು? ನಾ ಕಾಣೋ ಲೋಕವನ್ನು ಕಾಣೋರು ಯಾರು? ರಾತ್ರಿಯ ಕಳೆಯಲು ಅಮ್ಮನು ಹಾಡಿದ ಲಾಲಿಯ ಸವಿ ಕಥೆಯು ಕೇಳಿದ ಕಥೆಯಲಿ ಜಗವನು ಕಂಡೆನು ನೆನಪೇ ಹಚ್ಚಸಿರು ಹಿರಿಯರ ಮಾತನು ಕೇಳಲು ದಕ್ಕಿತು ಅರಿವಿನ ಈ ವರವು ಕನ್ನಡ ಪದದಲಿ ಬಾಗಿಲು ತೆರೆಯಿತು ಕಷ್ಟಗಳೇ ಇರವು ಅನುಭವದ ಭಾವಗಳ ಅನುಭವದಲ್ಲಿ ತಿಳಿದುಕೊಂಡೆ ನಂಬಿಕೆಯ ಜೀವನವಿಲ್ಲಿ ಹಾಡಲ್ಲೇ ಬಾಳೋ ಕೋಗಿಲೆ ನಾ ನಾ ಕಾಣೋ ಲೋಕವನ್ನು ಕಾಣೋರು ಯಾರು ನಾ ಕಾಣೋ ಲೋಕವನ್ನು ಕಾಣೋರು ಯಾರು ಹೇಳುವೆಯಾ ನೀ, ಓ ಇಬ್ಬನಿಯೇ ಮೆಲ್ಲನೆ ಹೇಳು, ಓ ಮಲ್ಲಿಗೆಯೇ ನನ್ನ ಕಾಣೋ ಭೂಮೀ ತಾಯೆ ನಿನ್ನ ನೋಡಲು ನನಗೆ ಇನ್ನೊಂದು ಜನ್ಮವು ಬೇಕು ಬಾನಾಡಿಯ ಹಾಗೆ ನಾ ಹಾಡಿ ಬದುಕಿರಲುಬೇಕು ನಾ ಕಾಣೋ ಲೋಕವನ್ನು ಕಾಣೋರು ಯಾರು? ನಾ ಕಾಣೋ ಲೋಕವನ್ನು ಕಾಣೋರು ಯಾರು?