Arere Avala Naguva
Vasuki Vaibhav
3:29ಕಾಗದದ ದೋಣಿಯಲ್ಲಿ ನಾ ಕೂರುವಂತ ಹೊತ್ತಾಯಿತೇ ಕಾಣಿಸದ ಹನಿಯೊಂದು ಕಣ್ಣಲ್ಲೇ ಕೂತು ಮುತ್ತಾಯಿತೇ ಹಗುರಾದೀತೇನೋ ನನ್ನೆದೆಯ ಭಾರ ಕಂಡಿತೇನೋ ತಂಪಾದ ತೀರ ಸಿಕ್ಕೀತೆ ಮುಂದಿನ ದಾರಿ ನನ್ನೆಲ್ಲ ಕಲ್ಪನೆ ಮೀರಿ ಇನ್ನೊಂದೇ ವಿಸ್ಮಯ ತೋರಿ ಹಾದಿಯಲಿ ಹೆಕ್ಕಿದ ನೆನಪಿನ ಪುಟ್ಟ ಜೋಳಿಗೆ ಬೆನ್ನಲ್ಲಿದೆ ಆಡದಿರೋ ಸಾವಿರ ಪದಗಳ ಮೂಕ ಸೇತುವೆ ಕಣ್ಮುಂದಿದೆ ಈ ಹೆಜ್ಜೆಯ ಗುರುತೆಲ್ಲವ ಅಳಿಸುತ್ತಿರೋ ಮಳೆಗಾಲವೇ ನಾ ನಿನ್ನಯ ಮಡಿಲಲ್ಲಿರೋ ಬರಿಗಾಲಿನ ಮಗುವಾಗುವೆ ಮನಸಾದೀತೇನೋ ಇನ್ನೂ ಉದಾರ ಬಂದೀತೇನೋ ನನ್ನಾ ಬಿಡಾರ ಸಿಕ್ಕೀತೆ ಮುಂದಿನ ದಾರಿ ನನ್ನೆಲ್ಲ ಕಲ್ಪನೆ ಮೀರಿ ಇನ್ನೊಂದೇ ವಿಸ್ಮಯ ತೋರಿ