Marate Hodenu
Pradeep Kumar, Shweta Devanahalli, J Anoop Seelin, And Jayanth Kaikini
4:06ನೀನೊಂದು ಆಶ್ಚರ್ಯ ಮುಟ್ಟಿಯೇ ನಾ ನಂಬಲಾ ಮೆಚ್ಚುತಾ ಮೆಚ್ಚುತಾ ಹೆಚ್ಚೇ ಆಯ್ತು ಹಂಬಲ ಅಪಹರಿಸುವ ಚೆಲುವು ಗರಿಗೆದರಿದೆ ಎದುರೇ ತಡವರಿಸುವ ತುಟಿಯ ಮಾತೆ ಬೇರೆ ಮೈ ಮರೆಸುತ ತನುವು ಶ್ರುತಿಗೊಳ್ಳುತಿದೆ ಉಸಿರೇ ಚಡಪಡಿಸುವ ಮನದ ಪಾಡೇ ಬೇರೆ ಸೆಳೆದರೆ ನೀ ಹೀಗೆ ಉಳಿಯಲಿ ನಾ ಹೇಗೆ ಪರದೆಯು ಬೇಕೇನು ನೋಡಿನ್ನು ತೆರೆಯ ಮರೆಯ ಮುಖ ನೀನು ಬೇಕು ಒಂದೇ ಮಾಯ ಸ್ಪರ್ಶ ಒಂಟಿ ಎಂಬ ಈ ಶಾಪ ನೀಗಲು ಹಾರಿ ನಿನ್ನ ಕಣ್ಣ ಕಿಡಿಯೂ ಮುದ್ದಾದ ಕಾಳ್ಗಿಚ್ಚು ಈಗ ನನ್ನಲೂ ನೀಗಿ ನೀಗಿ ಏಕಾಂತ ಕ್ಷಣವಿದು ವರ್ಣರಂಜಿತ ಹೃದಯವೇ ಹೂದೋಟ ಇನ್ನೀಗ ಅವಿತ ನಿಧಿಯ ಹುಡುಕಾಟ ನೋಟ ನನ್ನನ್ನು ತಬ್ಬುತಾ ಮಿಂಚು ನನ್ನಲ್ಲಿ ಹಬ್ಬುತಾ ಇನ್ನು ಎಲ್ಲಾನೂ ಉನ್ಮತ್ತ ಮಾತು ಒಂದೊಂದೇ ಸೋಲುತಾ ಮೌನ ಇನ್ನೇನು ಹೇಳುತಾ ಇನ್ನೂ ಈ ಜೀವ ನಿನ್ನತ್ತ