Yako Barlilla

Yako Barlilla

Naveen Sajju

Альбом: Lucia
Длительность: 4:14
Год: 2013
Скачать MP3

Текст песни

ಆಟಕ್ಕುಂಟು ಲೆಕ್ಕಕ್ಕಿಲ್ಲ
ಆಟಕ್ಕುಂಟು ಲೆಕ್ಕಕ್ಕಿಲ್ಲ

ಬಾನಲಿತ್ತು ಮುರಿದೋದ್ ಚಂದ್ರ
ಕೈಯ್ಯಲಿತ್ತು ಹರಿದೋದ್ ರೊಟ್ಟಿ
ಬಾನಲಿತ್ತು ಮುರಿದೋದ್ ಚಂದ್ರ
ಕೈಯ್ಯಲಿತ್ತು ಹರಿದೋದ್ ರೊಟ್ಟಿ

ಎರಡೂ ಕೂಡ್ಸಿ ಆಡೋ ಆಟಕ್ಕೆ
ಯಾಕೋ ಬರ್ಲಿಲ್ಲ ಇವ್ಳು ಯಾಕೋ ಬರ್ಲಿಲ್ಲ
ಯಾಕೋ ಬರ್ಲಿಲ್ಲ ಇವ್ಳು ಯಾಕೋ ಬರ್ಲಿಲ್ಲ

ಆಟಕ್ಕುಂಟು ಲೆಕ್ಕಕ್ಕಿಲ್ಲ
ಆಟಕ್ಕುಂಟು ಲೆಕ್ಕಕ್ಕಿಲ್ಲ
ಆಟಕ್ಕುಂಟು ಲೆಕ್ಕಕ್ಕಿಲ್ಲ ಲೆಕ್ಕಕ್ಕೆ ಇಲ್ಲ
ನಾನು ಲೆಕ್ಕುಕ್ಕೆ ಇಲ್ಲ

ಹೂವಿನ್ ಬಟ್ಲಲ್ ಕಿತ್ತು ತಂದೆ ನಕ್ಷತ್ರಾನೆಲ್ಲ
ಕಟ್ಟಿ ಮುಡ್ಸೋ ಹೊತ್ತಿಗೆ ಬೆಳ್ಕರ್ದ್ ಹೋಯ್ತಲ್ಲ
ಹೂವಿನ್ ಬಟ್ಲಲ್ ಕಿತ್ತು ತಂದೆ ನಕ್ಷತ್ರಾನೆಲ್ಲ
ಕಟ್ಟಿ ಮುಡ್ಸೋ ಹೊತ್ತಿಗೆ ಬೆಳ್ಕರ್ದ್ ಹೋಯ್ತಲ್ಲ
ಎಲ್ಲ ಮಾಯಾ ಆಯ್ತಲ್ಲ

ಹಣೆಮೆಲ್ ಬರ್ದವ್ನಂತೆ ದೇವ್ರು
ನೋಡ್ಕೋತಿನಿ ಕನ್ನಡಿ ಕೊಡ್ರೊ
ಹಣೆಮೆಲ್ ಬರ್ದವ್ನಂತೆ ದೇವ್ರು
ನೋಡ್ಕೋತಿನಿ ಕನ್ನಡಿ ಕೊಡ್ರೊ
ಕನ್ನಡಿ ಸಿಕ್ರೂ
ಕನ್ನಡಿ ಸಿಕ್ರೂ ಥಳ್ಕಮ್ಬಳ್ಕ
ಓದೋರು ಯಾರೋ ದೇವ್ರು ತುಂಬಾ ಹುಷಾರು

ಆಟಕ್ಕುಂಟು ಲೆಕ್ಕಕ್ಕಿಲ್ಲ
ಆಟಕ್ಕುಂಟು ಲೆಕ್ಕಕ್ಕಿಲ್ಲ

ಬಾನಲಿತ್ತು ಮುರಿದೋದ್ ಚಂದ್ರ
ಕೈಯ್ಯಲಿತ್ತು ಹರಿದೋದ್ ರೊಟ್ಟಿ
ಎರಡೂ ಕೂಡ್ಸಿ ಆಡೋ ಆಟಕ್ಕೆ
ಯಾಕೋ ಬರ್ಲಿಲ್ಲ ಇವ್ಳು ಯಾಕೋ ಬರ್ಲಿಲ್ಲ

ಸೇರಿನ್ ತುಂಬಾ ಅಕ್ಕಿ ತುಂಬಿ ಹೊಸ್ಲಲ್ಲಿಟ್ಟಿದ್ದೆ
ಬಲ್ಗಾಲ್ ಇಟ್ಟು ಬರ್ತಾಳಂತ ಬಾಗ್ಲು ಕಾಯ್ತಿದ್ದೆ
ಸೇರಿನ್ ತುಂಬಾ ಅಕ್ಕಿ ತುಂಬಿ ಹೊಸ್ಲಲ್ಲಿಟ್ಟಿದ್ದೆ
ಬಲ್ಗಾಲ್ ಇಟ್ಟು ಬರ್ತಾಳಂತ ಬಾಗ್ಲು ಕಾಯ್ತಿದ್ದೆ
ಅಲ್ಲೇ ಕನ್ಸೂ ಕಾಣ್ತಿದ್ದೆ

ಎದೆ ಮೇಲ್ ಜಾಡ್ಸಿ ಒದ್ದಂಗ್ ಆಯ್ತು
ಅವ್ಳಾಡಿದ್ದು ಒಂದೇ ಮಾತು
ಎದೆ ಮೇಲ್ ಜಾಡ್ಸಿ ಒದ್ದಂಗ್ ಆಯ್ತು
ಅವ್ಳಾಡಿದ್ದು ಒಂದೇ ಮಾತು

ತಿರುಕನ್ ಮಡಿಕೆ ಹೊಡ್ಕಂಡ್ ಬಿತ್ತು
ಕನ್ಸು ಚೆಲ್ಲೋಯ್ತು ಹೃದಯ ಒದ್ದಾಡ್ತ ಇತ್ತು
ಬಾನಲಿತ್ತು ಮುರಿದೋದ್ ಚಂದ್ರ