Love You Chinna

Love You Chinna

Raghu Dixit, Raghavendra V Kamath, Nakul Abhyankar, And Shruthi.Vs

Длительность: 4:55
Год: 2020
Скачать MP3

Текст песни

ಈ ಕನಸಲಿ ದಿನವು
ಸುರಿಸಿದೆ ಒಲವು
ನಗುತಲಿ ನೀನು
ಈ ಮನಸಲಿ ನಲಿವು
ಬದುಕಲಿ ಗೆಲುವು ತರುತಲಿ ನೀನು
ಉಸಿರೇ ನನಗಾಗಿ ನೀನಿರುವ ಹಾಗೆ
ಕೊರಳ ಧನಿಯಾಗಿ ನನ್ನ ಹಾಡಾಗುವೆ
ನನ್ನ ಸ್ನೇಹ ನನ್ನ ಪ್ರೇಮ
ನನ್ನ ಪ್ರೀತಿ ನೀನೇ
ನನ್ನ ಜೀವ ನನ್ನ ಭಾವ
ನನ್ನ ಲೋಕ ನೀನೇ ಎಂದಿಗೂ
ಈ ಒಡಲಲಿ ಮಿಡಿತ
ಹೃದಯದ ಬಡಿತ ತುಡಿತವು ನೀನು
ಈ ಎದೆಯಲಿ ಸೆಳೆತ
ಒಲವಿನಾ ಮೊರೆತ ಸ್ಮರಣೆಯು ನೀನು
ಒಲವೆ ವರವಾಗಿ ಬಂದಿರುವ ಹಾಗೆ
ಜನುಮ ನನದೆಲ್ಲಾ ನಿನದಾಗಿದೆ
ನನ್ನ ಸ್ನೇಹ, ನನ್ನ ಪ್ರೇಮ
ನನ್ನ ಪ್ರೀತಿ ನೀನೇ
ನನ್ನ ಜೀವ ನನ್ನ ಭಾವ
ನನ್ನ ಲೋಕ ನೀನೇ ಎಂದಿಗೂ
ನೋವಿಗೆ ನಗುವ ತರುವೆ ನೀನು
ಕತ್ತಲಲಿ ಬೆಳಕಾ ತರುವೆ ನೀನು
ನನ್ನಾಸೆಯ ಅರಿವು ನೀನು
ನೀನಾಗಿರುವೆ ನನ್ನ ನಿಲುವು
ನನ್ನ ಪ್ರೀತಿ ನನ್ನ ಕೀರ್ತಿ
ಮನ ಶಾಂತಿ ನೀನೇ
ನನ್ನ ಧೈರ್ಯ ನನ್ನ ಸ್ಥೈರ್ಯ
ಐಶ್ವರ್ಯ ನೀನೇ
ನನ್ನ ಮಾನ ನನ್ನ ಪ್ರಾಣ
ಸನ್ಮಾನ ನೀನೇ
ನನ್ನ ಮೌನ ನನ್ನ ಧ್ಯಾನ
ಸನ್ಮಾರ್ಗ ನೀನೇ ಎಂದಿಗೂ