Meghagala Bagilali

Meghagala Bagilali

V. Manohar

Длительность: 4:56
Год: 1999
Скачать MP3

Текст песни

ಓ ಮೇಘಗಳ ಬಾಗಿಲಲಿ ಚಂದ್ರಮುಖಿ
ಆ ಚಂದ್ರಮುಖಿ ಸೋದರಿ ಪ್ರೇಮಸಖಿ

ಓ ಮೇಘಗಳ ಬಾಗಿಲಲಿ ಚಂದ್ರಮುಖಿ
ಆ ಚಂದ್ರಮುಖಿ ಸೋದರಿ ಪ್ರೇಮಸಖಿ
ಒಲವಿನ ಹೃದಯಕೆ ಪನ್ನೀರಲಿ ಅಭಿಷೇಕವ ಮಾಡಿದಳು
ಅದರಲಿ ಉದಯಿಸೋ ಹೊಸ ಹೊಸ ಆಸೆಗೆ ಸ್ಪೂರ್ತಿಯ ನೀಡಿದಳು

ಓ ಮೇಘಗಳ ಬಾಗಿಲಲಿ ಚಂದ್ರಮುಖಿ
ಆ ಚಂದ್ರಮುಖಿ ಸೋದರಿ ಪ್ರೇಮಸಖಿ

ಕಲ್ಯಾಣವೇ ಕಲ್ಯಾಣವೇ ಮನಸಿಗೆ ಕಲ್ಯಾಣವೇ
ನೇಸರನ ಪಲ್ಲಂಗದಿ ಪ್ರಣಯಕೆ ಸೋಬಾನವೇ
ಕುಹೂ ಕುಹೂ ಕೋಗಿಲೆ ವಸಂತಕೆ ಬಾರೆಲೇ
ಸಖಿಯರ ಸೇರೆ ನೀ, ಸುಖಿ ಪದ ನೀಡೆಲೇ
ರವಿತೇಜನೇ ದಾರಿ ಬಿಡು ಬೆಳದಿಂಗಳ ತೇರಿಗೆ
ತಂಗಾಳಿಯೇ ತಂಪು ಕೊಡು
ಸಂಗಾತಿ ಸಂಗಕ್ಕೆ
ಸಂಪ್ರೀತಿ ತೋಟಕ್ಕೆ

ಓ ಮೇಘಗಳ ಬಾಗಿಲಲಿ ಚಂದ್ರಮುಖಿ
ಆ ಚಂದ್ರಮುಖಿ ಸೋದರಿ ಪ್ರೇಮಸಖಿ

ಓ ಗಂಗೆಯೇ ಈ ಪ್ರೇಮಕೆ ಎಂದೆಂದು ನೀ ಕಾವಲು
ಈ ಜನ್ಮವು ನಿನಗಾಗಿಯೇ ನನ್ನಾಣೆಗೂ ಮೀಸಲು
ಓ ಗಿರಿ ಕಡಲಂತೆಯೇ ನಮ್ಮ ಪ್ರೀತಿ ಶಾಶ್ವತ
ಮೈನಾಗಳು ನೀಡಿತು ಇಂದು ನಮಗೆ ಸಮ್ಮತ
ಸಂತೋಷದ ನಾದಸ್ವರ ಈ ನಿನ್ನ ತೋಳಿನಲಿ
ಈ ಮಾತಲೇ ಸಪ್ತಸ್ವರ
ಅಲೆಯಾಗಿ ಅಲೆಯಾಗಿ
ಅನುರಾಗ ಕಡಲಾಯ್ತು

ಓ ಮೇಘಗಳ ಬಾಗಿಲಲಿ ಚಂದ್ರಮುಖಿ
ಆ ಚಂದ್ರಮುಖಿ ಸೋದರಿ ಪ್ರೇಮಸಖಿ
ಒಲವಿನ ಹೃದಯಕೆ ಪನ್ನೀರಲಿ ಅಭಿಷೇಕವ ಮಾಡಿದಳು
ಅದರಲಿ ಉದಯಿಸೋ ಹೊಸ ಹೊಸ ಆಸೆಗೆ ಸ್ಪೂರ್ತಿಯ ನೀಡಿದಳು

ಓ ಮೇಘಗಳ ಬಾಗಿಲಲಿ ಚಂದ್ರಮುಖಿ
ಆ ಚಂದ್ರಮುಖಿ ಸೋದರಿ ಪ್ರೇಮಸಖಿ