Geethanjali Pushpanjali
S.P. Balasubrahmanyam
4:32(ಸ್ವಾತಂತ್ರಕೋಸ್ಕರ ಗಾಂಧೀಜಿನೂ ಹೋರಾಡಿದ್ರು, ನೇತಾಜಿನೂ ಹೋರಾಡಿದ್ರು ಆದರೂ ಕೊನೆಗೂ ಗೆದಿದ್ದು ಮಹಾತ್ಮಾ ಗಾಂಧಿ ತಾನೇ ತಂದೆ ಮಾತು ಕೇಳ್ತಿಯಾ ಅನ್ನೋ ನಂಬ್ಕೇಲಿ ನಿನಗ್ ರಾಮ್ ಅಂತ ಹೆಸರಿಟ್ಟೆ ಆದ್ರೆ ಅದ್ರಲ್ಲಿ ನಿನ್ನ ಕಾಡಿಗ್ ಕಲಸೋ ಉದ್ದೇಶ ಇದ್ದಿದಿಲ್ಲ ಯಾಕೆಂದ್ರೆ ನನಗ್ ಲಕ್ಷ್ಮಣ, ಭರತ, ಶತ್ರುಜ್ಞ ಯಾರು ಇಲ್ಲ) Oh, my son ಅಮ್ಮನ ಆಸೆಯ ಆರತಿ ಆಗು ಅಪ್ಪನ ಆಸೆಯ ಆಗಸವಾಗು ಒಳ್ಳೇ... ಜನರಲೊಂದಾಗು ನಾಡಿನ ಒಳ್ಳೆಯ ಪ್ರಜೆಯಾಗು Oh, my son ಅಮ್ಮನ ಆಸೆಯ ಆರತಿ ಆಗು ಅಪ್ಪನ ಆಸೆಯ ಆಗಸವಾಗು ಒಳ್ಳೇ... ಜನರಲೊಂದಾಗು ನಾಡಿನ ಒಳ್ಳೆಯ ಪ್ರಜೆಯಾಗು ಯಾರು ಹೆತ್ತರಯ್ಯ ಇಂತ ಕಂದನನ್ನು ಅಂತ ಲೋಕ ಮೆಚ್ಚಬೇಕು ನಿನ್ನನ್ನು ನಮ್ಮ ಆಶಾ ಗೋಪುರದ ಕಳಶವಾಗು ವಿದ್ಯೆ ಎಂಬ ಖಡ್ಗ ಒಂದು ತಂದೆ ಕೊಡುಗೆ ವಿನಯವೆಂಬ ಅಸ್ತ್ರ ಒಂದು ತಾಯ ಕೊಡುಗೆ ಧ್ರೋಹಿ ಎಂಬ ಪಟ್ಟದಿಂದ ದೂರವಾಗು ಕೋಪವೇ ಹಿಂಸೆಗೆ ಕಾರಣ ಸಹನೆಯೆ ಬಾಳಿಗೆ ಭೂಷಣ ಆವೇಶವನು ಜಯಿಸು ಓಂ ಸಹನ ಭವತು ಜಪಿಸು Oh, my son ಅಮ್ಮನ ಆಸೆಯ ಆರತಿ ಆಗು ಅಪ್ಪನ ಆಸೆಯ ಆಗಸವಾಗು ಒಳ್ಳೇ... ಜನರಲೊಂದಾಗು ನಾಡಿನ ಒಳ್ಳೆಯ ಪ್ರಜೆಯಾಗು ನಿನ್ನ ಬಾಳಿಗೊಂದು ಪುಟ್ಟ ಗುರಿಯಿರಲಿ ಸರಳ ರೇಖೆಯಲ್ಲಿ ದಿಟ್ಟ ನಡೆಯಿರಲಿ ಅಕ್ಕ ಪಕ್ಕ ನೋಡದಂತೆ ನೀನು ಸಾಗು ನಿನಗೆ ಮಾತ್ರವಲ್ಲ ನಿನಗಾಗೋ ನೋವು ಪಾಲುದಾರರಯ್ಯ ನೋವಿನಲ್ಲು ನಾವು ನೋವು ನೀಡದಂತ ಮುದ್ದು ಮಗನಾಗು ಆತುರ ಪಟ್ಟರೆ ಆಪತ್ತು ಮಾನವೆ ಸಜ್ಜನ ಸಂಪತ್ತು ಅಹಂಕಾರವನು ತ್ಯಜಿಸು ಓಂ ಶಾಂತಿ ಶಾಂತಿ ಜಪಿಸು Oh, my son ಕನ್ನಡ ತಾಯಿಗೆ ಆರತಿ ಆದೆ ಭಾರತ ಮಾತೆಯ ಕೀರುತಿ ಆದೆ ನಾಡೆ... ಮೆಚ್ಚುವ ಮಗನಾದೆ ನಮ್ಮ... ಎದೆಗೆ ಹಾಲೆರೆದೆ ನನ್ನ ಮನೆ ನನ್ನ ಮಗ ಅಂದೆ ನಾನು ನಮ್ಮ ನಾಡೆ ನನ್ನ ಮನೆ ಅಂದೆ ನೀನು ನಿನ್ನ ಮನೆಯಲ್ಲಿ ನೀ ಚಿರಾಯು ಆದೆ ಹಿಂಸೆಯನ್ನು ಸಹಿಸಬೇಕು ಅಂದೆ ನಾನು ಸಹಿಸುವುದೆ ಅಪರಾಧ ಎಂದೆ ನೀನು ಒಪ್ಪಿಕೊಂಡೆ ಕಿರಿಯರಿಗೆ ಗುರುವಾದೆ ಸಾವಿರ ಎರಡು ಸಾವಿರ ವರ್ಷದ ಮಹಾ ಮನ್ವಂತರ ಈ ಧರೆಯು ಕಾಣಲಿದೆ ಅಲ್ಲಿ ನಿನ್ನ ಮಾತು ಫಲಿಸಲಿದೆ Oh, my son ಕನ್ನಡ ತಾಯಿಗೆ ಆರತಿ ಆದೆ ಭಾರತ ಮಾತೆಯ ಕೀರುತಿ ಆದೆ ನಾಡೆ... ಮೆಚ್ಚುವ ಮಗನಾದೆ ನಮ್ಮ... ಎದೆಗೆ ಹಾಲೆರೆದೆ